ದನಿಪಯಣ
ದನಿಪಯಣ

ದನಿಪಯಣ

Gururaj Kulkarni

Overview
Episodes

Details

*ದನಿಪಯಣ* ಪಾಡ್‌ಕಾಸ್ಟ್‌ ಕಾರ್ಯಕ್ರಮದ ಉದ್ದೇಶ ಶಾಲೆಯಲ್ಲಿ ಕಲಿಸದ, ಪಠ್ಯ ಪುಸ್ತಕಗಳಲ್ಲಿ ಇರದ ನಮ್ಮ ಊರು-ನಾಡುಗಳ ಕತೆ-ಇತಿಹಾಸ ತಿಳಿದುಕೊಳ್ಳೋದು ಮತ್ತು ಮಕ್ಕಳಿಗೆ ತಿಳಿಸುವುದು. ಈ ಪಾಡ್‌ಕಾಸ್ಟ್‌ ಸಂಚಿಕೆಗಳು ರೇಡಿಯೋ-ಗಿರ್ಮಿಟ್ನಲ್ಲಿ (radiogirmit.com) ವಾರ-ಬಿಟ್ಟು-ವಾರ ಗುರುವಾರ ಪ್ರಸಾರ ಆಗುತ್ತವೆ.

Recent Episodes

ದನಿಪಯಣ - ವನಿತಾ ಸೇವಾ ಸಮಾಜದ ಮಾಯಿ ದಿ.ಭಾಗೀರಥಿಬಾಯಿ
JUN 25, 2022
ದನಿಪಯಣ - ವನಿತಾ ಸೇವಾ ಸಮಾಜದ ಮಾಯಿ ದಿ.ಭಾಗೀರಥಿಬಾಯಿ
ಬಹಳ ದಿನಗಳ ನಂತರ ಒಂದು #ದನಿಪಯಣ ಸಂಚಿಕೆ ಮಾಡಿದ್ದೇವೆ. ಈ ಸಲ ಧಾರವಾಡದ ವನಿತಾ ಸೇವಾ ಸಮಾಜಕ್ಕೆ ಹೋಗಿ, ಅದರ ಸ್ಥಾಪಕಿ ಶ್ರೀಮತಿ ಭಾಗೀರಥಿಬಾಯಿ ಪುರಾಣಿಕರ ಸ್ಫೂರ್ತಿ ತುಂಬುವ ಜೀವನದ ಬಗ್ಗೆ ಮಾತನಾಡಿದ್ದೇವೆ.  ನಿಮಗೆ ಗೊತ್ತಾ? 🔶 ಬಾಲವಿಧವೆಯಾಗಿದ್ದ ಶ್ರೀಮತಿ ಭಾಗೀರಥಿಬಾಯಿ ಪುರಾಣಿಕ ವನಿತಾ ಸೇವಾ ಸಮಾಜ ಸ್ಥಾಪಿಸಿ ಅದರ ಮೂಲಕ ಸಾವಿರಾರು ಹೆಣ್ಣುಮಕ್ಕಳಿಗೆ ಜೀವನ ಮಾರ್ಗ ತೋರಿಸಿದ್ದರು. 🔶 ಸಮಾಜದ ಎಲ್ಲರೂ ಶ್ರೀಮತಿ ಭಾಗೀರಥಿಬಾಯಿ ಅವರಿಗೆ ಪ್ರೀತಿ-ಗೌರವದಿಂದ 'ಮಾಯಿ' ಅಂತಲೇ ಕರೆಯುತ್ತಿದ್ದರು. 🔶 ೧೯೨೮ರಲ್ಲಿ ಮಾಯಿಯಿಂದ ಸ್ಥಾಪಿತವಾದ ವನಿತಾ ಸೇವಾ ಸಮಾಜದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹೈಸ್ಕೂಲ್‌ವರೆಗೆ, ನಂತರ ನೇಯ್ಗೆ-ಹೊಲಿಗೆ-ಕಸೂತಿ ಇತ್ಯಾದಿ ವೃತ್ತಿ ಶಿಕ್ಷಣವೂ, ಶಿಕ್ಷಕರ ತರಬೇತಿ ಸಂಸ್ಥೆಯೂ ನಡೆಯುತ್ತಿದ್ದವು. 🔶 ಹೆರಿಗೆ ಮನೆ, ನಿಸರ್ಗ ಚಿಕಿತ್ಸಾಲಯ, ಆಯುರ್ವೇದ ಔಷಧಾಲಯ ಎಲ್ಲ ಇದೇ ಜಾಗದಲ್ಲಿ ನಡೆಯುತ್ತಿದ್ದವು. 🔶 ಇಂದಿನ ಪದ್ಮಪ್ರಶಸ್ತಿಗಳಂತೆ ಆವಾಗಿನ ಆಂಗ್ಲ ಸರಕಾರ ಕೊಡುತ್ತಿದ್ದ ಕೈ‌ಸರ್-ಎ-ಹಿಂದ್ ಪ್ರಶಸ್ತಿ ಪಡೆದ ಮೊದಲ ಕನ್ನಡತಿ ಮಾಯಿ. ಬನ್ನಿ ನಮ್ಮ #ದನಿಪಯಣ ಸಂಚಿಕೆ ಕೇಳಿ. ಮಾಯಿ ಸ್ಥಾಪಿಸಿದ ಸಂಸ್ಥೆಗೆ ನೀವೂ ಸಹಾಯ ಮಾಡಿ, ವಿವರಗಳು ಇಲ್ಲಿವೆ 👉 http://www.vanitasevasamajdharwad.org/appeal.html ಈ ದನಿಪಯಣದ ಸಂಚಿಕೆಯಲ್ಲಿ ಉಲ್ಲೇಖಿಸಿದ ಫೋಟೋಗಳು, ಚಿತ್ರಗಳು ಈ ಬ್ಲಾಗ್ ಪೋಸ್ಟ್‌ನಲ್ಲಿವೆ.
play-circle icon
28 MIN
ಬೆಂಗಳೂರಿನ ನರಹರಿರಾಯರ ಗುಡ್ಡಕ್ಕೆ ದನಿಪಯಣ
DEC 31, 2020
ಬೆಂಗಳೂರಿನ ನರಹರಿರಾಯರ ಗುಡ್ಡಕ್ಕೆ ದನಿಪಯಣ
ಈ #ದನಿಪಯಣ ಸಂಚಿಕೆಯಲ್ಲಿ ಬೆಂಗಳೂರಿನ ಹನುಮಂತ ನಗರದಲ್ಲಿರುವ ನರಹರಿರಾಯರ ಗುಡ್ಡಕ್ಕೆ ಹೋಗಿ, ಅದು ನೆನಪಿಸುವ ವಿಷಯಗಳ ಬಗ್ಗೆ ಮಾತನಾಡುತ್ತ ನಡೆಯಲಿದ್ದೇವೆ. 🔶 ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ ಶಿವಾಲಯವಾಗಿದ್ದ ಇಲ್ಲಿನ ದೇವಸ್ಥಾನ ಈಗ ಕುಮಾರಸ್ವಾಮಿ ಗುಡಿಯಾಗಿ ಪ್ರಸಿದ್ಧವಾಗಿದೆ. 🔶 ಕಳೆದ ಶತಮಾನದ ಶುರುವಿನಲ್ಲಿ ಹೈಕೋರ್ಟ್ ಜಜ್ ಆಗಿದ್ದ ಶ್ರೀ ನರಹರಿರಾಯರು ಇಲ್ಲಿನ ಗುಡಿಯನ್ನು ನವೀಕರಿಸಿದ್ದರಿಂದ ಈ ಬೆಟ್ಟಕ್ಕೆ ನರಹರಿರಾಯರ ಗುಡ್ಡ ಎಂದೇ ಹೆಸರಾಗಿದೆ. 🔶 ಮೌಂಟ್ ಜಾಯ್ ಎಂದು ಅಧಿಕೃತ ಹೆಸರಿರುವ ಇದಕ್ಕೆ, ಕೆಲವು ತಮಿಳರು ಪೊನ್ನುಮಲೈ ಎಂದು ಹೆಸರು ಬದಲಿಸಲು ಸಂಚುಮಾಡಿದ್ದರು. 🔶 ಖ್ಯಾತ ಕರ್ನಾಟಕ ಸಂಗೀತ ವಿದುಷಿ ಬೆಂಗಳೂರು ನಾಗರತ್ನಮ್ಮನವರಿಗೂ ಈ ಬೆಟ್ಟಕ್ಕೂ ಏನು ಸಂಬಂಧ ಗೊತ್ತಾ? 🔶 ಸ್ತ್ರೀವಾದಿಯಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಬೆಂಬಲಿಗರಾಗಿ, ಸಂಘಟನಕಾರ್ತಿಯಾಗಿ ನಾಗರತ್ನಮ್ಮನವರ ಹೋರಾಟ, ಸಾಧನೆಗಳ ಬಗ್ಗೆ ನಿಮಗೆ ಗೊತ್ತಾ? ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.
play-circle icon
27 MIN
ದನಿಪಯಣದಲ್ಲಿ ಹುಬ್ಬಳ್ಳಿಯ ಸ್ವಾತಂತ್ರ್ಯ ಸಮರ
SEP 6, 2020
ದನಿಪಯಣದಲ್ಲಿ ಹುಬ್ಬಳ್ಳಿಯ ಸ್ವಾತಂತ್ರ್ಯ ಸಮರ
ಸ್ವಾತಂತ್ರ್ಯ ದಿನದ ತಡವಾದ ಶುಭಾಶಯಗಳು. ಅಗಸ್ಟ್ ೧೬ರ ಈ #ದನಿಪಯಣ ಸಂಚಿಕೆಯಲ್ಲಿ ಗಂಡುಮೆಟ್ಟಿನ ನೆಲ ಹುಬ್ಬಳ್ಳಿಯಲ್ಲಿನ ಸ್ವಾತಂತ್ರ್ಯ ಸಮರದ ನೆನಪುಗಳ ಬಗ್ಗೆ ಮಾತನಾಡುತ್ತ ನಡೆಯಲಿದ್ದೇವೆ. 🔶 ಹುಬ್ಬಳ್ಳಿಯನ್ನು ಕರ್ಮಭೂಮಿಯಾಗಿಸಿಕೊಂಡಿದ್ದ ಧೈರ್ಯಶಾಲಿ ಮಹಿಳೆ ಶ್ರೀಮತಿ ಉಮಾಬಾಯಿ ಕುಂದಾಪುರರು ಭಗಿನಿ ಮಂಡಳದ ಮೂಲಕ ಸ್ವಾತಂತ್ರ್ಯದ ಸ್ವಯಂಸೇವಕಿಯರನ್ನು ಸಜ್ಜುಗೊಳಿಸುತಿದ್ದರು. 🔷 ನಿಮಗೆ ಗೊತ್ತಾ ? ಈಗ ಹುಬ್ಬಳ್ಳಿ-ಬೆಂಗಳೂರಿನಲ್ಲಿ ಮುಖ್ಯ ನೆಲೆ ಕಂಡುಕೊಂಡಿರುವ 'ಸಂಯುಕ್ತ ಕರ್ನಾಟಕ' ಶುರುವಾಗಿದ್ದು ಬೆಳಗಾವಿಯಲ್ಲಿ, ಅದೂ ವಾರಪತ್ರಿಕೆಯಾಗಿ.. 🔶 ಧಾರವಾಡದ ವಿದ್ಯಾರಣ್ಯ ಶಾಲೆಯಲ್ಲಿ ಸಹೋದ್ಯೋಗಿಗಳಾಗಿದ್ದ ಸರ್ವಶ್ರೀ ರಂಗನಾಥ ದಿವಾಕರ, ಮಧ್ವರಾವ್ ಕಬ್ಬೂರ ಮತ್ತು ರಾಮರಾವ ಹುಕ್ಕೇರಿಕರರು ಶುರುಮಾಡಿದ್ದ "ಕರ್ಮವೀರ" ಪತ್ರಿಕೆಗೆ ಆ ಹೆಸರು ಕೊಡಲು ಕಾರಣವೇನು ಗೊತ್ತಾ? 🔷 ಬಡತನದಲ್ಲಿಯೇ ಹುಟ್ಟಿ, ಕಷ್ಟ ಪಟ್ಟು ಬೆಳದ ಸರ್ ಸಿದ್ದಪ್ಪ ಕಂಬಳಿಯವರು ಅಂದಿನ ಬಾಂಬೆ ಸರಕಾರದಲ್ಲಿ ಶಿಕ್ಷಣ, ಕೃಷಿ, ಅಬಕಾರಿ ಸಚಿವರಾಗಿ ದುಡಿದವರು. ಅಂದಿನ ಬಹುತೇಕ ನಾಯಕರಂತೆ ಗಾಂಧಿ ಬೆಂಬಲಿಗರಾಗದೇ , ಕಾಂಗ್ರೆಸ್‌ಗೆ ಸ್ಪರ್ಧಿಯಾಗಿದ್ದವರು. 🔶 ಹಿಂದುಸ್ಥಾನ ಸೇವಾದಳವನ್ನು ಸ್ಥಾಪಿಸಿದ ಡಾ.ನಾ.ಸು.ಹರ್ಡಿಕರರು ಹುಬ್ಬಳ್ಳಿಯವರು. ದಳದ ಕೇಂದ್ರ ಕಚೇರಿ ಹುಬ್ಬಳ್ಳಿಯೇ ಆಗಿತ್ತು. 🔷 ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಹದಿಮೂರು ವರ್ಷದ ಬಾಲಕ ನಾರಾಯಣ ಡೋಣಿ ಹುಬ್ಬಳ್ಳಿಯಲ್ಲಿ ಹುತಾತ್ಮನಾಗಿದ್ದ. ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ. ಈ ಸಂಚಿಕೆಯಲ್ಲಿ ನಾವು ಉಪಯೋಗಿಸಿದ ಹಾದಿ, ಕಂಡ ದೃಶ್ಯಗಳ ಚಿತ್ರಗಳು ಈ ಬ್ಲಾಗಿನಲ್ಲಿವೆ : http://antarangada-mrudanga.blogspot.com/2020/09/blog-post.html ನಿಮಗೆ ಗೊತ್ತಿರೊ ಹಾಗೆ : *ದನಿಪಯಣ* ಪಾಡ್‌ಕಾಸ್ಟ್‌ ಕಾರ್ಯಕ್ರಮದ ಉದ್ದೇಶ ಶಾಲೆಯಲ್ಲಿ ಕಲಿಸದ, ಪಠ್ಯ ಪುಸ್ತಕಗಳಲ್ಲಿ ಇರದ ನಮ್ಮ ಊರು-ನಾಡುಗಳ ಕತೆ-ಇತಿಹಾಸ ತಿಳಿದುಕೊಳ್ಳೋದು ಮತ್ತು ಮಕ್ಕಳಿಗೆ ತಿಳಿಸುವುದು. ಈ ಪಾಡ್‌ಕಾಸ್ಟ್‌ ಸಂಚಿಕೆಗಳು ರೇಡಿಯೋ-ಗಿರ್ಮಿಟ್ನಲ್ಲಿ (radiogirmit.com) ಎರಡು ವಾರಕ್ಕೊಮ್ಮೆಯಂತೆ ಗುರುವಾರ ಪ್ರಸಾರ ಆಗುತ್ತವೆ. ದನಿಪಯಣ ದ ಹಿಂದಿನ ಸಂಚಿಕೆಗಳು ಗೂಗಲ್‌ಪಾಡ್‌ಕಾಸ್ಟ್ ನಲ್ಲಿ ಲಭ್ಯವಿವೆ: https://www.google.com/podcasts?feed=aHR0cHM6Ly9hbmNob3IuZm0vcy8xMTAwMTAyMC9wb2RjYXN0L3Jzcw== ನಮ್ಮ ದನಿಪಯಣದ ಸಂಚಿಕೆಗಳನ್ನು ಇತರ ಆಸಕ್ತರಿಗೆ ಫಾರ್ವರ್ಡ್ ಮಾಡಿ. ನಿಮಗೆ ಕೇಳಲು ಆಸಕ್ತಿ ಇಲ್ಲವಾದರೆ, ದಯವಿಟ್ಟು ತಿಳಿಸಿ. ಮುಂದಿನ ಸಂಚಿಕೆಯಿಂದ ತೊಂದರೆ ಕೊಡೋದಿಲ್ಲ🙏 ಅನಿಮಿಷ ಮತ್ತು ಗುರುರಾಜ ಕುಲಕರ್ಣಿ
play-circle icon
36 MIN
ದನಿಪಯಣದಲ್ಲಿ ಧಾರವಾಡದ ಕೆಇಬೋರ್ಡ್ ಸಂಸ್ಥೆ
JUN 28, 2020
ದನಿಪಯಣದಲ್ಲಿ ಧಾರವಾಡದ ಕೆಇಬೋರ್ಡ್ ಸಂಸ್ಥೆ
ಈ ಸಲ ನಾವು ನಮ್ಮ ಧಾರವಾಡದ "ರ್‍ಯಾಂಕುಗಳ ಬ್ಯಾಂಕು" ಕೆಇಬೋರ್ಡ ಸಂಸ್ಥೆಯ ಶಾಲೆಗಳಿಗೆ ಪಯಣ ಹೊರಟಿದ್ದೇವೆ: 👉 ಧಾರವಾಡದ ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾಗಿ, ಕರ್ನಾಟಕ ಕಾಲೇಜಿನ ಸ್ಥಾಪಕರಾಗಿ, ಧಾರವಾಡವನ್ನು ವಿದ್ಯಾಕಾಶಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ರಾವ್ ಬಹಾದ್ದೂರ್ ಶ್ರೀ ರೊದ್ಧ ಶ್ರೀನಿವಾಸರಾಯರೇ ಕರ್ನಾಟಕ ಪ್ರೌಢಶಾಲೆಯ, ಕೆಇಬೋರ್ಡ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರು. 👉 ಕೆಇಬೋರ್ಡ ಸಂಸ್ಥೆ ಸ್ವಾತಂತ್ರ್ಯ ಹೋರಾಟಗಾರರ ತವರು ಇದ್ದಂತೆ. ಇಲ್ಲಿಯ ಡಾ.ಕಬ್ಬೂರ, ಶ್ರೀ ಕರಮರಕರ, ಶ್ರೀ ಕೆ.ಜಿ. ಜೋಷಿ ಕರನಿರಾಕರಣೆ/ಕಾನೂನು ಭಂಗ ಚಳುವಳಿಗಳಲ್ಲಿ ಮುಂದಾಳತ್ವ ವಹಿಸಿದ್ದರು. ಇಲ್ಲಿ ಮುಖ್ಯೋಪಾಧ್ಯಯರಾಗಿದ್ದ ಶ್ರೀ ಶನೋಲಕರರು ಶ್ರೀ ಎಸ್‌ಜಿ ನಾಡಗೇರರು ಭೂಗತ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಸ್ವಾತಂತ್ರ್ಯ ಹೋರಾಟದ ಕರಪತ್ರಗಳು ಆಗಾಗ ಈ ಸಂಸ್ಥೆಯ ಕರ್ನಾಟಕ ಹೈಸ್ಕೂಲಿನಲ್ಲಿ ಅಚ್ಚಾಗುತ್ತಿದ್ದವು. 👉 ಈಗ ಜೆಎಸ್‌ಎಸ್ ಕಾಲೇಜೆಂದು ಪ್ರಸಿದ್ಧವಾಗಿರುವ ಕಾಲೇಜು, ಈಗ ವಿದ್ಯಾರಣ್ಯ ಶಾಲೆ ಇರುವ ಜಾಗದಲ್ಲೇ ಶುರುವಾಗಿತ್ತು. ಖ್ಯಾತ #ಕನ್ನಡ ಕವಿ, #ಕನ್ನಡದ ಕಣ್ವ ಶ್ರೀ ಯವರು ಅದರ ಮೊದಲ ಪ್ರಾಂಶುಪಾಲರು. 👉 "ಕನ್ನಡ ನೆಲದ ಪುಲ್ಲೆನಗೆ ಪಾವನ ತುಳಸಿ" ಎಂ ಖ್ಯಾತ ಕವಿ ಶ್ರೀ ಸಾಲಿ ರಾಮಚಂದ್ರ ರಾಯರು ಇಲ್ಲಿ ಸಾಲಿ ಕಲಿಸಿದ್ದರಷ್ಟೇ ಅಲ್ಲ, ಸಾಲಿಗೆ ಪ್ರಾರ್ಥನಾ ಪದ್ಯ ಬರೆದು ಕೊಟ್ಟಿದ್ದಾರೆ. 👉 ಬಿಎಂಶ್ರೀಯವರು, ಶ್ರೀ ಬೇಂದ್ರೆ, ಶ್ರೀ ಶಂಬಾ, ಶ್ರೀ ರಂಗನಾಥ ದಿವಾಕರ, ಶ್ರೀ ಕುಂದಣಗಾರ ಹೀಗೆ ಈ ಸಂಸ್ಥೆಗೆ ಸಂಬಂಧಿಸಿದ ಐವರು #ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ವಹಿಸಿದ್ದರು. ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ. ಈ ಸಂಚಿಕೆಯಲ್ಲಿ ನಾವು ಉಪಯೋಗಿಸಿದ ಹಾದಿ, ಕಂಡ ದೃಶ್ಯಗಳ ಚಿತ್ರಗಳು ಈ ಬ್ಲಾಗಿನಲ್ಲಿವೆ : http://antarangada-mrudanga.blogspot.com/2020/06/blog-post.html?m=1
play-circle icon
31 MIN
ದನಿಪಯಣ - ಕುಮಾರಸ್ವಾಮಿ ಬಡಾವಣೆ ದರ್ಶನ
MAY 30, 2020
ದನಿಪಯಣ - ಕುಮಾರಸ್ವಾಮಿ ಬಡಾವಣೆ ದರ್ಶನ
ಲಾಕ್ಡೌನ್ ನಡುವೆ ದೂರ ಪಯಣ ಹೋಗದೆ ನಾವು ನಮ್ಮ ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಇತಿಹಾಸವನ್ನು ಈ ಸಲದ #ದನಿಪಯಣ ಸಂಚಿಕೆಯಲ್ಲಿ ತಿಳಿಯಲಿದ್ದೇವೆ. 👉 ಈ ಬಡಾವಣೆಗೆ ಹೆಸರು ಬರಲು ಇಲ್ಲಿರುವ ಉದ್ಭವ ಕುಮಾರಸ್ವಾಮಿ ದೇವಸ್ಥಾನ ಕಾರಣ. 👉 ಕ್ರಿಶ ೧೮೦೫ರಲ್ಲಿ ಸ್ಥಾಪನೆಯಾಗಿರುವ ಖಾನೆ ಮುನೇಶ್ವರ ಗುಡಿಯಲ್ಲಿ ನವ-ಶಿಲಾಯುಗದ್ದವೆಂದು ಹೇಳಲಾಗುವ ಕಲ್ಲಿನ ಕೊಡಲಿಗಳಿವೆ. 👉 ಇಲ್ಲಿನ ಯಲ್ಲಮ್ಮನ ಗುಡಿಯಲ್ಲಿ ಸುಮಾರು ೬೦೦ ವರ್ಷಗಳ ಹಳೆಯ ಶಿಲಾಶಾಸನವಿದೆ. ಈಗಿನ ಯಲಚೇನಹಳ್ಳಿಯನ್ನು ಅದರಲ್ಲಿ 'ಎಳೆಜಿಯನಹಹಳ್ಳಿ' ಎಂದು ಉಲ್ಲೇಖಿಸಲಾಗಿದೆ. 👉 ಸಾರಕ್ಕಿಯ ಸಾರಂಗಧರನ ಕತೆ ಗೊತ್ತಾ ? ಕತೆಯ ಪ್ರಕಾರ ಅವನು ಇವತ್ತಿನ ಸಾರಕ್ಕಿಯ ರಾಜಕುಮಾರ. ಅವನು ಪ್ರೀತಿಸಿದವಳನ್ನು ಅವರಪ್ಪ ಮದುವೆಯಾಗಿ ಸಾರಂಗಧರನನ್ನು ಗಡಿಪಾರು ಮಾಡುತ್ತಾನೆ. ರಾಜ್ಯದ ಮೇಲೆ ವೈರಿ ದಾಳಿ ಮಾಡಿದಾಗ ಸಾರಂಗಧರ ಮರಳಿ ಬಂದು ಯುದ್ಧ ಗೆದ್ದು ಕೊಡುತ್ತಾನೆ. ಆದರೂ ಚಿಕ್ಕಮ್ಮನ ಚಾಡಿಯಿಂದಾಗಿ ಅವರಪ್ಪ ಅವನಿಗೆ ಮರಣದಂಡನೆ ವಿಧಿಸುತ್ತಾನೆ. ಕತೆಯ ಪ್ರಕಾರ ಅವನ ಮರಣದಂಡನೆ ಇಂದು ದಯಾನಂದ ಸಾಗರ ಕಾಲೇಜಿರುವ ಶಾವಿಗೆ ಮಲ್ಲೇಶ್ವರ ಬೆಟ್ಟದಲ್ಲಿಯೇ ಆಗಿತ್ತು. ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ. ಈ ಸಂಚಿಕೆಯಲ್ಲಿ ನಾವು ಉಪಯೋಗಿಸಿದ ಹಾದಿ, ಕಂಡ ದೃಶ್ಯಗಳ ಚಿತ್ರಗಳು ಈ ಬ್ಲಾಗಿನಲ್ಲಿವೆ : http://antarangada-mrudanga.blogspot.com/2020/05/blog-post.html
play-circle icon
27 MIN